ನವದೆಹಲಿ, ಸೆ. 14 (DaijiworldNews/MB) : ಸೋಮವಾರ ಆರಂಭವಾದ ಸಂಸತ್ನ ಮುಂಗಾರು ಅಧಿವೇಶನಕ್ಕೂ ಮುನ್ನ ನಡೆಸಿದ ಕಡ್ಡಾಯ ಕೊರೊನಾ ಪರೀಕ್ಷೆಯಲ್ಲಿ ಸಂಸತ್ತಿನ ಹದಿನೇಳು ಸದಸ್ಯರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 13 ಮತ್ತು 14 ರಂದು ಲೋಕಸಭಾ ಸದಸ್ಯರನ್ನು ಸಂಸತ್ ಭವನದಲ್ಲಿ ಪರೀಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಸೋಂಕಿತ ಸಂಸದರಲ್ಲಿ ಬಿಜೆಪಿ ಸಂಸದರು ಅಧಿಕವಾಗಿದ್ದಾರೆ ಎನ್ನಲಾಗಿದ್ದು 12 ಮಂದಿ ಬಿಜೆಪಿ ಸಂಸದರು, ವೈಆರ್ಎಸ್ ಕಾಂಗ್ರೆಸ್ನ ಇಬ್ಬರು ಸಂಸದರು, ಶಿವಸೇನೆ, ಡಿಎಂಕೆ ಮತ್ತು ಆರ್ಎಲ್ಪಿಯ ತಲಾ ಒಬ್ಬರು ಸಂಸದರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸೋಂಕು ದೃಢಪಟ್ಟ ಸಂಸದರ ಪೈಕಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಕೂಡಾ ಒಬ್ಬರು ಎಂದು ಹೇಳಲಾಗಿದೆ.