ಬೆಂಗಳೂರು, ಸೆ. 15 (DaijiworldNews/MB) : ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಾಗಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಪೊಲೀಸರ ಈ ತನಿಖೆಯ ಪ್ರಕಾರವಾಗಿ ಈ ಡ್ರಗ್ಸ್ ಬಳಕೆದಾರರು ಹಾಗೂ ದಲ್ಲಾಳಿಗಳು ಹೆಚ್ಚಾಗಿ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರು ನಗರ ಪೊಲೀಸರ ಕಳೆದ ಒಂದು ತಿಂಗಳಲ್ಲಿ ಸುಮಾರು 300 ಕ್ಕೂ ಅಧಿಕ ದಾಳಿಗಳನ್ನು ನಡೆಸಿದ್ದು ಈ ದಾಳಿಯಲ್ಲಿ ಬಂಧಿಸಲಾದ ಆರೋಪಿಗಳು ಸುಮಾರು 18 ರಿಂದ 25 ವರ್ಷದೊಳಗಿನವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ದಾಳಿಯು ಈವರೆಗಿನ ವರ್ಚದ ಅಧಿಕ ದಾಳಿಯಾಗಿದೆ ಎನ್ನಲಾಗಿದೆ.