ಹುಬ್ಬಳ್ಳಿ, ಸೆ. 15 (DaijiworldNews/MB) : ''ಡ್ರಗ್ಸ್ ವಿಚಾರದಲ್ಲಿ ಸಾಕ್ಷ್ಯ ದೊರೆತರೆ ಶಾಸಕ ಜಮೀರ್ ಅಹ್ಮದ್ನನ್ನು ಗಲ್ಲಿಗೇರಿಸಿ'' ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡ್ರ''ಗ್ಸ್ ಜಾಲದಲ್ಲಿ ಸಣ್ಣವರಾಗಲಿ, ದೊಡ್ಡವರಾಗಲಿ, ಯಾವ ಪಕ್ಷದವರೇ ಇದ್ದರೂ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.
ಇನ್ನು ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಅವರ ವಿರುದ್ದದ ಡ್ರಗ್ಸ್ ಜಾಲದ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಅವರು, ''ಡ್ರಗ್ಸ್ ಜಾಲದಲ್ಲಿ ಜಮೀರ್ ಅಹ್ಮದ್ ಅವರ ವಿರುದ್ಧ ಸಾಕ್ಷಿ ಇದ್ದರೆ ಅವರನ್ನು ಗಲ್ಲಿಗೇರಿಸಿ ಎಂದು ಅವರೇ ಹೇಳಿದ್ದಾರೆ. ಅವರ ಆಸ್ತಿಯನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಿ'' ಎಂದು ಹೇಳಿದ್ದಾರೆ.
ಹಾಗೆಯೇ ''ಸಂಬರಗಿ ಹೇಳಿದರು ಎಂದು ತನಿಖೆ ಮಾಡುವುದಲ್ಲ. ರಾಜಕೀಯವಾಗಿ ಮುಗಿಸಲು ಯಾರೂ ಯಾರ ಮೇಲೆಯೂ ಆರೋಪ ಮಾಡಬಾರದು'' ಎಂದು ಹೇಳಿದ್ದಾರೆ.