ಚೆನ್ನೈ, ಸೆ 15 (DaijiworldNews/PY): ಕೊರೊನಾ ದೃಢಪಟ್ಟ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡಿದೆ ಎಂದು ಎಸ್.ಪಿ.ಬಿ ಪುತ್ರ ಎಸ್.ಪಿ ಚರಣ್ ತಿಳಿಸಿದ್ದಾರೆ.
ಸೋಮವಾರ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಎಸ್.ಪಿ.ಬಿ ಪುತ್ರ ಎಸ್.ಪಿ ಚರಣ್ ಅವರು, ಶ್ವಾಸಕೋಶದ ಆರೋಗ್ಯ ಉತ್ತಮವಾಗಿದ್ದು, ಚೇತರಿಕೆಯಾಗುತ್ತಿರುವುದು ಎಕ್ಸ್-ರೇನಲ್ಲಿ ಕಾಣಬಹುದು. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಅಲ್ಲದೇ, ತಂದೆ ಈಗ 15-20 ನಿಮಿಷ ಕುಳಿತಿರುತ್ತಾರೆ. ಈಗ ಅವರಿಗೆ ನೇರವಾಗಿ ಆಹಾರ ನೀಡುತ್ತಿದ್ದೇವೆ. ತಂದೆಯವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಎಸ್ಪಿಬಿ ಅವರಿಗೆ ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.