ನವದೆಹಲಿ, ಸೆ 15 (DaijiworldNews/PY): ಸೆಪ್ಟೆಂಬರ್ 25ರಿಂದ ರಾಷ್ಟ್ರವ್ಯಾಪ್ತಿ ಮತ್ತೊಂದು ಲಾಕ್ಡೌನ್ ಹೇರಲಾಗುವುದು ಹಾಗೂ ಅಕ್ಟೋಬರ್ 1ರಿಂದ ಸಿನೆಮಾ ಹಾಲ್ಗಳನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿರುವ ವದಂತಿಗಳನ್ನು ಪ್ರೆಸ್ ಬ್ಯೂರೋ ಆಫ್ ಇಂಡಿಯಾ(ಪಿಐಬಿ) ನಿರಾಕರಿಸಿದೆ.
ಸೆ.25ರ ಮಧ್ಯರಾತ್ರಿಯಿಂದ ಮತ್ತೆ 46 ದಿನಗಳವರೆಗೆ ರಾಷ್ಟ್ರವ್ಯಾಪ್ತಿ ಕಟ್ಟುನಿಟ್ಟಿನ ಲಾಕ್ಡೌನ್ ವಿಧಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಯೋಜನಾ ಆಯೋಗವು, ಪ್ರಧಾನಮಂತ್ರಿ ಕಚೇರಿಗೆ ನಿರ್ದೇಶನ ನೀಡಿದೆ ಎಂದು ಹೇಳಿರುವ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗುತ್ತಿದ್ದು, ಇಂತಹ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದಿಲ್ಲ ಎಂದು ಪಿಬಿಐ ತಿಳಿಸಿದೆ.
ಈ ರೀತಿಯಾದ ವದಂತಿಯೊಂದು ಹರಿದಾಡುತ್ತಿದ್ದು, ಇದನ್ನು ಪರಿಶೀಲಿಸಿದಾಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಯೋಜನಾ ಆಯೋಗವು ಇಂತಹ ಯಾವುದೇ ಆದೇಶ ಹೊರಡಿಸಿಲ್ಲ. ಪಿಬಿಐ ಫ್ಯಾಕ್ಟ್ ಚೆಕ್ನಲ್ಲಿ ಈ ರೀತಿಯಾದ ಯಾವುದೇ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ ಎಂದು ಪಿಬಿಐ ಸ್ಪಷ್ಟಪಡಿಸಿದೆ.