ನವದೆಹಲಿ, ಸೆ. 15 (DaijiworldNews/MB) : ವಾಕ್ ಸ್ವಾತಂತ್ಯ್ರವನ್ನು ಮೊಟಕುಗೊಳಿಸಲು ಕೇಂದ್ರ ಸರ್ಕಾರವು ದೇಶದ್ರೋಹ ಕಾನೂನನ್ನು ಅಸ್ತ್ರವನ್ನಾಗಿಸಿದೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಗಂಭೀರ ಆರೋಪ ಮಾಡಿದ್ದಾರೆ.
ವೆಬಿನಾರ್ ಒಂದರಲ್ಲಿ ಮಾತನಾಡಿದ ಅವರು, ಸರ್ಕಾರವು ಸಂವಿಧಾನಾತ್ಮಕ ವಿಧಾನದಲ್ಲಿ ನಮ್ಮ ವಾಕ್ ಸ್ವಾತಂತ್ಯ್ರಕ್ಕೆ ಧಕ್ಕೆ ಉಂಟು ಮಾಡಲು ಮುಂದಾಗಿದ್ದ ಇದಕ್ಕಾಗಿ ದೇಶದ್ರೋಹ ಕಾನೂನನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ವಾಕ್ ಸ್ವಾತಂತ್ಯ್ರವನ್ನು ಕಸಿಯುವ ಸರ್ಕಾರದ ಪ್ರಯತ್ನದ ಭಾಗವಾಗಿ ದೇಶದಲ್ಲಿಂದು ದಿಢೀರನೇ ದೇಶದ್ರೋಹದ ಆರೋಪ ಪ್ರಕರಣಗಳು ಅಧಿಕವಾಗುತ್ತಿದೆ ಎಂದು ಕೂಡಾ ಹೇಳಿದ್ದಾರೆ.
ಪ್ರಸ್ತುತ ದೇಶದ ಸಮಗ್ರತೆ ಮತ್ತು ಏಕತೆ ಬಗ್ಗೆ ಯಾರು ಮಾತನಾಡುತ್ತಾರೆ ಅವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಅವರನ್ನು ಮುಂಜಾಗ್ರತಾ ಕ್ರಮವಾಗಿ ಜೈಲಿಗಟ್ಟಲಾಗುತ್ತಿದೆ. ಯುವಕರು ವಿದ್ಯಾರ್ಥಿಗಳು ದೇಶಕ್ಕೆ ಒಳ್ಳೆಯದ್ದನ್ನು ಮಾಡುವ ಉದ್ದೇಶದಿಂದ ಮಾತನಾಡುತ್ತಾರೆ. ಆದರೆ ಸರ್ಕಾರ ನಿಮ್ಮನ್ನು ಕಾನೂನು ಬಾಹಿರ ಹಾಗೂ ದೇಶ ದ್ರೋಹದ ಆರೋಪದಲ್ಲಿ ಬಂಧಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದು ದೆಹಲಿ ಗಲಭೆಯಲ್ಲಿ ಸಂಚು ಆರೋಪದಲ್ಲಿ ಜೆಎನ್ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಬಂಧನದ ಬೆನ್ನಿಗೆ ಹೇಳಿರುವ ಈ ನ್ಯಾಯಮೂರ್ತಿಗಳ ಮಾತು ಚರ್ಚೆಗೆ ಗ್ರಾಸವಾಗಿದೆ.