ಬೆಂಗಳೂರು, ಸೆ 15 (DaijiworldNews/PY): ಯಾವುದೇ ಕಾರಣಕ್ಕೂ ವೈದ್ಯರು ಮುಷ್ಕರ ಮಾಡಬಾರದು. ಮುಷ್ಕರ ಕೈಬಿಡಿ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದ ಅವರು, ವೈದ್ಯರಿಗೆ ವೇತನ ಹೆಚ್ಚು ಮಾಡುವ ವಿಚಾರವನ್ನು ಸಿಎಂ ಬಿಎಸ್ವೈ ಅವರಿಗೆ ತಿಳಿಸಿದ್ದೇನೆ. ಅಲ್ಲದೇ, ಈ ವಿಚಾರವಾಗಿ ಮುಖ್ಯಮಂತ್ರಿ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾದ ಸಂಕಷ್ಟದ ಸಂದರ್ಭ ಕೊರೊನಾ ವಾರಿಯರ್ಗಳಾದ ವೈದ್ಯರು ಉತ್ತಮವಾದ ಕಾರ್ಯನಿರ್ವಹಿಸಿದ್ದಾರೆ. ಕೊರೊನಾದ ಸಂಕಷ್ಟದ ಸಂದರ್ಭ ವೈದ್ಯರು ಮುಷ್ಕರ ಮಾಡಬಾರದು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹಾಗಾಗಿ ಈಗಾಗಲೇ ಈ ಮುಷ್ಕರವನ್ನು ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರಿ ವೈದ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದಿನಿಂದ ಒಂದು ವಾರಗಳ ಕಾಲ ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆ ಸೆ.15ರಿಂದ 21ರವರೆಗೆ ಕೊರೊನಾ ವರದಿ ಸಿಗುವುದು ಅನುಮಾನ.