ಬೆಂಗಳೂರು, ಸೆ 15 (DaijiworldNews/PY): ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ದೋಷಿಯಾಗಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ 2021ರ ಜನವರಿ 27ರಂದು ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಕೇಂದ್ರ ಕಾರಾಗೃಹ ತಿಳಿಸಿದೆ.
ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಡಿ ನರಸಿಂಹ ಮೂರ್ತಿ ಎನ್ನುವವರು ಮಾಹಿತಿ ಕೋರಿ ಕೇಂದ್ರ ಕಾರಾಗೃಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ ಬೆಂಗಳೂರು ಕೇಂದ್ರ ಕಾರಾಗೃಹವು 2021ರ ಜನವರಿ 27ರಂದು ಶಶಿಕಲಾ ಅವರು ಬಿಡುಗಡೆಯಾಗಲಿದ್ದು, ನ್ಯಾಯಾಲಯವು ನೀಡಿದಂತೆ ದಂಡ ಮೊತ್ತವನ್ನು ಪಾವತಿಸಲಾಗುತ್ತದೆ. ಇದನ್ನು ಮುಂದೂಡಿದರೆ ಶಶಿಕಲಾ ಅವರ ಬಿಡುಗಡೆ ಮುಂದೂಡಲಾಗುತ್ತದೆ ಎಂದು ಹೇಳಿದ್ದಾರೆ.
ವಿ.ಕೆ ಶಶಿಕಲಾ ನಟರಾಜನ್ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. 2017ರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದು, ಮುಂದಿನ ವರ್ಷ ಜನವರಿಗೆ ಜೈಲು ಶಿಕ್ಷೆ ಪೂರ್ಣಗೊಳ್ಳಲಿದೆ.