ನವದೆಹಲಿ, ಸೆ 15 (DaijiworldNews/PY): ವಾಷಿಂಗ್ಟನ್ ಡಿಸಿಯಲ್ಲಿರುವ ವಿಶ್ವಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತದ ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರು ನೇಮಕಗೊಂಡಿದ್ದರೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.
1988 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಖುಲ್ಲರ್ ಅವರನ್ನು ಪ್ರಸ್ತುತ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಅವರು ನವೆಂಬರ್ ಮೊದಲ ವಾರದಲ್ಲಿ ವಿಶ್ವಬ್ಯಾಂಕ್ಗೆ ಸೇರಲಿದ್ದಾರೆ.
ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಖುಲ್ಲರ್ ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ಸೇರಿದಂತೆ ದೇಶಗಳನ್ನು ಪ್ರತಿನಿಧಿಸಲಿದ್ದಾರೆ. 2023ರ ಆ.31ರವರೆಗೆ ವಿಶ್ವಬ್ಯಾಂಕ್ನಲ್ಲಿ ಅವರ ಅಧಿಕಾರಾವಧಿಯಿರುತ್ತದೆ.
ಆದರೆ, ಸಚಿವಾಲಯದ ಇನ್ನೊಂದು ಆದೇಶದಲ್ಲಿ, ಸಮೀರ್ ಕುಮಾರ್ ಖರೆ ಅವರನ್ನು ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇವರ ಅಧಿಕಾರದ ಅವಧಿಯು ಮೂರು ವರ್ಷವಾಗಿರುತ್ತದೆ.