ನವದೆಹಲಿ, ಸೆ.15(DaijiworldNews/HR): ಕೊರೊನಾ ವೈರಸ್ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ರೋಗ ಹರಡುವುದನ್ನು ತಡೆಯಲು ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಈ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳನ್ನು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹತ್ತು ಲಕ್ಷಕ್ಕೆ 3,320 ಮತ್ತು ಸಾವಿನ ಪ್ರಮಾಣ 55 ಆಗಿದೆ. ಇದು ಜಗತ್ತಿನಲ್ಲೇ ಅತೀ ಕಡಿಮೆ ಎಂದಿದ್ದಾರೆ.
ಇನ್ನು ಲಾಕ್ಡೌನ್ನಿಂದಾಗಿ ಅಂದಾಜು 14 ಲಕ್ಷದಿಂದ 29 ಲಕ್ಷದವರೆಗೆ ಸೋಂಕು ಪ್ರಕರಣಗಳನ್ನು ಮತ್ತು 37,000-78,000 ಸಾವು ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ಈ ನಾಲ್ಕು ತಿಂಗಳುಗಳನ್ನು ಆರೋಗ್ಯವಲಯದಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲು, ಮಾನವ ಸಂಪನ್ಮೂಲ ಹೆಚ್ಚಿಸಲು ಮತ್ತು ಪಿಪಿಇ ಕಿಟ್, ಎನ್95 ಮಾಸ್ಕ್, ವೆಂಟಿಲೇಟರ್ಗಳನ್ನು ಭಾರತದಲ್ಲೇ ನಿರ್ಮಿಸಲು ಸದುಪಯೋಗ ಪಡಿಸಿಕೊಂಡೆವು ಎಂಬುದಾಗಿ ಹರ್ಷವರ್ಧನ್ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 50 ಲಕ್ಷದತ್ತ ಸಾಗುತ್ತಿದ್ದು, ಪ್ರತಿದಿನ ಪ್ರಕರಣಗಳ ಸಂಖ್ಯೆ 90,000ಕ್ಕಿಂತ ಕಡಿಮೆ ಇದೆ ಎಂದರು.