ನವದೆಹಲಿ, ಸೆ 15 (DaijiworldNews/PY): ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ದೇಶದ ದಾರಿ ತಪ್ಪಿಸಿದ್ದಾರೆ ಎನ್ನುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತದ ಮೇಲೆ ಚೀನಾ ಆಕ್ರಮಣ ಮಾಡಿದೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ದೇಶದ ದಾರಿ ತಪ್ಪಿಸಿದ್ದಾರೆ ಎನ್ನುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ನಮ್ಮ ದೇಶವು ಯಾವಾಗಲೂ ಭಾರತೀಯ ಸೇನೆಯೊಂದಿಗೆ ಇರಲಿದೆ ಹಾಗೂ ಎಂದಿಗೂ ಇರುತ್ತದೆ. ಆದರೆ, ಮೋದಿ ಅವರೇ, ನೀವು ಯಾವಾಗ ಚೀನಾದ ವಿರುದ್ದ ನಿಲ್ಲುತ್ತೀರಿ? ನಮ್ಮ ದೇಶದ ಭೂಮಿಯನ್ನು ಯಾವಾಗ ಚೀನಾದಿಂದ ಹಿಂಪಡೆಯುತ್ತೀರಿ? ಚೀನಾದ ಹೆಸರು ಹೇಳಲು ಹಿಂಜರಿಯದಿರಿ ಎಂದಿದ್ದಾರೆ.