ನವದೆಹಲಿ, ಸೆ 16 (DaijiworldNews/PY): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದು, ಕೊರೊನಾ ಬಿಕ್ಕಟ್ಟಿನ ಹಂತದಲ್ಲಿ ನೀಡಿದ್ದ ಭರವಸೆಗಳು ವಿಫಲವಾಗಿವೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 21 ದಿನಗಳಲ್ಲಿ ಕೊರೊನಾವನ್ನು ನಿಯಂತ್ರಿಸುವ ಬಗ್ಗೆ ಗಾಳಿಯಲ್ಲಿ ಕೋಟೆ ಕಟ್ಟುವುದು, ಜನರನ್ನು ರಕ್ಷಣೆಯ ಸಲುವಾಗಿ ಆರೋಗ್ಯ ಸೇತು ಆಪ್, 20 ಲಕ್ಷ ಕೋಟಿ ಪ್ಯಾಕೇಜ್, ನಮ್ಮ ಗಡಿಗೆ ಯಾರೂ ಪ್ರವೇಶ ಮಾಡಿಲ್ಲ ಹಾಗೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಒಂದು ಸತ್ಯವೂ ಇದೆ. ವಿಪತ್ತಿನಲ್ಲಿ ಕೇಂದ್ರ ಲಾಭ ಪಡೆಯುತ್ತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಹಿನ್ನೆಲೆ ಪಿಎಂ ಕೇರ್ಸ್ ನಿಧಿಯನ್ನು 2020ರ ಮಾರ್ಚ್ನಲ್ಲಿ ಪ್ರಾರಂಭಿಸಲಾಯಿತು. ಪಿಎಂ ಕೇರ್ಸ್ ನಿಧಿಯು ಕೊರೊನಾ ವಿರುದ್ದದ ಹೋರಾಟವನ್ನು ಬಲಪಡಿಸುವ ಅಲ್ಲದೇ ಉತ್ತಮ ಚಿಕಿತ್ಸೆ ಕಲ್ಪಿಸುವ ಗುರಿಯನ್ನು ಹೊಂದಿದೆ.
ಈ ನಿಧಿಯ ಸ್ಥಾಪನೆಗೆ ಕಾಂಗ್ರೆಸ್ ವಿರುದ್ದವಾಗಿದ್ದು, ಅಲ್ಲದೇ, ನಿಧಿಗೆ ಧಾನಿಗಳ ಹೆಸರನ್ನು ಬಹಿರಂಗಪಡಿಸಿದೇ ಇದ್ದ ಕಾರಣ ಕೇಂದ್ರದ ವಿರುದ್ದ ಕಾಂಗ್ರೆಸ್ ಹರಿಹಾಯ್ದಿತ್ತು.