ನವದೆಹಲಿ, ಸೆ. 16 (DaijiworldNews/MB) : ಕಳೆದ ಆರು ತಿಂಗಳಿನಲ್ಲಿ ಚೀನಾ ಭಾರತ ಗಡಿಯಲ್ಲಿ ಯಾವುದೇ ನುಸುಳುವಿಕೆ ಪ್ರಕರಣಗಳು ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಚೀನಾ ಭಾರತದ ಗಡಿಯಲ್ಲಿ ಕಳೆದ ಆರು ತಿಂಗಳಿನಿಂದ ಯಾವುದೇ ನುಸುಳುವಿಕೆ ಪ್ರಕರಣಗಳು ನಡೆದಿಲ್ಲ ಎಂದು ಹೇಳಿರುವ ಕೇಂದ್ರವು ಇದೇ ವೇಳೆ ಪಾಕಿಸ್ತಾನದ ಗಡಿಯಲ್ಲಿ 47 ಬಾರಿ ಒಳಸುಳುವಿಕೆಯ ಪ್ರಯತ್ನಗಳು ನಡೆದಿದೆ ಎಂದು ತಿಳಿಸಿದೆ.
ಈ ಬಗ್ಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿರುವ ಕೇಂದ್ರ ಗೃಹ ಸಚಿವಾಲಯವು, ಪಾಕ್ ಉಗ್ರರು ಜಮ್ಮು ಮತ್ತು ಕಾಶ್ಮೀರದೊಳಗೆ 594 ಬಾರಿ ನುಸುಳಲು ಯತ್ನಿಸಿದ್ದು ಈ ಪೈಕಿ 312 ಬಾರಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದೆ. ಭದ್ರತಾ ಪಡೆಯು ಕಳೆದ ಮೂರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 562 ಉಗ್ರರನ್ನು ಹತ್ಯೆ ಮಾಡಿದ್ದು ಒಟ್ಟು 46 ಉಗ್ರರನ್ನು ಬಂಧಿಸಿದ್ದಾರೆ. 2018ರಿಂದ ಸೆಪ್ಟೆಂಬರ್ 8, 2020ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 76 ಸೇನಾ ಯೋಧರು ಹತ್ಯೆಯಾಗಿದ್ದಾರೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಜಿ. ಕೃಷ್ಣಾರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದಾರೆ.