ನವದೆಹಲಿ, ಸೆ 17 (DaijiworldNews/PY): ಉದ್ಯೋಗವು ಘನತೆಯಾಗಿದ್ದು, ಸರ್ಕಾರ ಇದನ್ನು ಎಷ್ಟು ದಿನ ನಿರಾಕರಿಸುತ್ತದೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಸುಮಾರು 1 ಕೋಟಿಗೂ ಅಧಿಕ ಮಂದಿ ಉದ್ಯೋಗಕ್ಕಾಗಿ ಸರ್ಕಾರದ ಪೋರ್ಟಲ್ನಲ್ಲಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆದರೆ, ಕೇವಲ 1.77 ಲಕ್ಷ ಉದ್ಯೋಗವಷ್ಟೇ ಇರುವುದಾಗಿ ದಿನಪತ್ರಿಕೆಯೊಂದರ ವರದಿಯನ್ನು ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಯುವಕರ ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗಿಗಳ ದಿನ ಎಂದಿದ್ದಾರೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.