ನವದೆಹಲಿ, ಸೆ 17 (DaijiworldNews/PY): ಕೊರೊನಾ ಲಸಿಕೆ ಕಂಡು ಹಿಡಿಯಲು ಇತರ ರಾಷ್ಟ್ರಗಳಂತೆ ಭಾರತವೂ ಕೂಡಾ ಪ್ರಯತ್ನಿಸುತ್ತಿದೆ. ಪ್ರಧಾನಮಂತ್ರಿ ಅವರ ಮಾರ್ಗದರ್ಶನದಲ್ಲಿ, ತಜ್ಞರ ಗುಂಪು ಸಂಶೋಧನೆ ಕೈಗೊಂಡಿದೆ. ಮುಂದಿನ ವರ್ಷದ ಆರಂಭದ ವೇಳೆಗೆ ಭಾರತದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ದೇಶದ ಕೊರೊನಾ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಲಸಿಕೆ ಕಂಡು ಹಿಡಿಯಲು ಇತರ ರಾಷ್ಟ್ರಗಳಂತೆ ಭಾರತವೂ ಕೂಡಾ ಪ್ರಯತ್ನಿಸುತ್ತಿದೆ. ಪ್ರಧಾನಮಂತ್ರಿ ಅವರ ಮಾರ್ಗದರ್ಶನದಲ್ಲಿ, ತಜ್ಞರ ಗುಂಪು ಸಂಶೋಧನೆ ಕೈಗೊಂಡಿದೆ. ನಮ್ಮಲ್ಲಿ ಸುಧಾರಿತ ಯೋಜನೆಗಳಿವೆ. ಮುಂದಿನ ವರ್ಷದ ಆರಂಭದ ವೇಳೆಗೆ ಭಾರತದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ 90 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಅಲ್ಲದೇ, ಸಾವಿನ ಪ್ರಮಾಣವು ಕೂಡಾ ಅಧಿಕವಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರವು ಭಾರತದಲ್ಲಿ ಲಸಿಕೆ ಬಿಡುಗಡೆ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.