ಚಿಕ್ಕಮಗಳೂರು, ಸೆ 17 (DaijiworldNews/PY): ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಆದರೆ, ಹಿಂದಿ ದಿವಸ್ಗೆ ವಿರೋಧಿಸುತ್ತಾರೆ ಇದು ನಾಟಕ ಅಲ್ಲವೇ? ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಆದರೆ ಹಿಂದಿ ದಿವಸ್ ಆಚರಣೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇದು ನಾಟಕ ಅಲ್ಲವೇ? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತದೆ. ಆದರೆ, ಕಾಂಗ್ರೆಸ್ಗೆ ಕನ್ನಡದ ಬಗ್ಗೆ ಮಾತನಾಡುವಂತ ನೈತಿಕತೆ ಎಲ್ಲಿದೆ? ಕನ್ನಡದ ಉಳಿವಿಗೋಸ್ಕರ ಮಾಡುವಂತ ಎಲ್ಲಾ ಪ್ರಯತ್ನಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದಿದ್ದಾರೆ.