ನವದೆಹಲಿ,ಸೆ.18 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಸೆ.17ರಂದು ತಮ್ಮ 70 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮಗೆ ಶುಭಾಶಯ ಕೋರಿದ ಜನರಲ್ಲಿ ಉಡುಗೊರೆಯೊಂದನ್ನು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹಲವರು ನನ್ನ ಬಳಿ ಉಡುಗೊರೆ ಏನು ಬೇಕೆಂದು ಕೇಳಿದ್ದೀರಿ, ಮಾಸ್ಕ್ ಧರಿಸುವುದು ಹಾಗೂ ಅಂತರಕಾಯ್ದುಕೊಳ್ಳುವುದನ್ನು ನೀವು ಪಾಲಿಸುವುದೇ ನನಗೆ ನೀವು ನೀಡುವ ಉಡುಗೊರೆ ಎಂದಿದ್ದಾರೆ.
ಇನ್ನು ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದ ಪ್ರಧಾನಿ ಮೋದಿ, 'ಜನ್ಮದಿನದ ಉಡುಗೊರೆಯಾಗಿ ನನಗೆ ಏನು ಬೇಕೆಂದು ಬಹಳಷ್ಟು ಜನ ಕೇಳಿದ್ದೀರಿ. ಹೀಗಾಗಿ ನನಗೇನು ಬೇಕು ಎಂಬುದನ್ನು ಕೇಳುತ್ತಿದ್ದೇನೆ. ಮೊದಲನೆಯದಾಗಿ ಯಾವಾಗಲೂ ಮಾಸ್ಕ್ ಧರಿಸಿರಿ. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ನೆನಪಿಟ್ಟುಕೊಳ್ಳಿ. ಜನಸಂದಣೆಯ ಜಾಗಗಳಿಂದ ದೂರವಿರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ನಮ್ಮ ಜಗತ್ತನ್ನು ಆರೋಗ್ಯ ಪೂರ್ಣಗೊಳಿಸೋಣ' ಎನ್ನುವ ನಾಲ್ಕು ಉಡುಗೊರೆಯನ್ನು ಪ್ರಧಾನಿ ಮೋದಿ ಕೇಳಿ ಟ್ವೀಟ್ ಮಾಡಿದ್ದಾರೆ.