ನವದೆಹಲಿ, ಸೆ.19(DaijiworldNews/HR): 'ಇದು ದೇವರ ಆಟ' ಎಂದು ಒಬ್ಬ ಸರಳ ಹಣಕಾಸು ಸಚಿವೆ ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್'ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನು ಪ್ರತಿಪಕ್ಷದವರು ಹಾಗೂ ಹಲವರು ಟೀಕಿಸಿದರು ಏಕೆಂದರೆ ನಾನು ನೋಡಲು ಸರಳವಾಗಿ ಪಕ್ಕದ ಮನೆಯ ಆಂಟಿಯಂತೆ ಕಾಣುತ್ತೇನೆ, ಆದರೆ ಅಂದು ನಾನು ಆಡಿರುವ ಮಾತುಗಳನ್ನು ತಿರುಚಿದ್ದು ನೋಡಿದರೆ ವಿರೋಧ ಪಕ್ಷದವರ ಬೇಜವಾಬ್ದಾರಿ ವರ್ತನೆ ತೋರಿಸುತ್ತದೆ ಎಂದಿದ್ದಾರೆ.
ಇನ್ನು ಕಳೆದ ಆಗಸ್ಟ್ 27ರಂದು ನಿರ್ಮಲಾ ಸೀತಾರಾಮನ್, ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಇದೆಲ್ಲ ದೇವರ ಆಟ, ಹಣಕಾಸಿನ ಮೇಲೆ ಇದು ಪರಿಣಾಮವನ್ನುಂಟುಮಾಡಿದೆ ಎಂದಿದ್ದರು. ಇದಕ್ಕೆ ದೇಶದಾದ್ಯಂತ ಅನೇಕರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.