ನವದೆಹಲಿ, ಸೆ.19(DaijiworldNews/HR): ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದ್ದ 'ಗುಂಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್' ಸಿನಿಮಾದಲ್ಲಿ ಭಾರತೀಯಾ ವಾಯುಪಡೆ ಮತ್ತು ತಮ್ಮ ಪಾತ್ರವನ್ನು ಬಿಂಬಿಸಿರುವ ರೀತಿಯ ಬಗ್ಗೆ ಅಭಿಪ್ರಾಯದ ಅಫಿಡವಿಟ್ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೆನಾ ಅವರಿಗೆ ತಿಳಿಸಿದೆ.
ಈ ಬಗ್ಗೆ ನ್ಯಾಯಮೂರ್ತಿ ರಾಜೀವ್ ಶಖ್ದೇರ್ ಅವರ ಏಕಸದಸ್ಯ ನ್ಯಾಯಪೀಠವು, ನಿಮ್ಮೊಂದಿಗೆ ಮಾಡಿಕೊಂಡಿದ್ದ ಯಾವುದೇ ಒಪ್ಪಂದವನ್ನು ಚಿತ್ರ ನಿರ್ಮಾಪಕರು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆಯೂ ಅಫಿಡವಿಟ್ನಲ್ಲಿ ಮಾಹಿತಿ ಇರಬೇಕು ಎಂಬುದಾಗಿ ಸೂಚಿಸಿದೆ.
ಈ ಸಿನಿಮಾವು ಗುಂಜನ್ ಸಕ್ಸೆನಾ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. ಆದರೆ ಅವರ ಜೀವನ ಆಧರಿಸಿದ ಚಿತ್ರವಲ್ಲ' ಎಂದು ಚಿತ್ರದ ಸೂಚನೆಯು ಸ್ಪಷ್ಟಪಡಿಸುತ್ತದೆ. ಮತ್ತು ವಾಯುಪಡೆಯನ್ನು ವೈಭವೀಕರಿಸುತ್ತದೆ ಎಂದು ಸಕ್ಸೆನಾ ವೈಯಕ್ತಿಕವಾಗಿ ಅಭಿಪ್ರಾಯಪಡುತ್ತಾರೆ' ಎಂದು ಸಕ್ಸೆನಾ ಪರ ವಕೀಲ ದಯನ್ ಕೃಷ್ಣನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.