ಲಕ್ನೋ, ಸೆ.19(DaijiworldNews/HR): ಕುಖ್ಯಾತ ಗ್ಯಾಂಗ್ ಸ್ಟಾರ್ ಸುಭಾಷ್ ಯಾದವ್ ನಿವಾಸದ ಮೇಲೆ ಗಾಜಿಯಾಬಾದ್ ಪೊಲೀಸರು ಇಂದು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ.
ಯಾದವ್ ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಹಲವಾರು ಆರೋಪಗಳಲ್ಲಿ ಶಾಮೀಲಾಗಿರುವುದಾಗಿ ವರದಿ ಹೇಳಿದೆ.
ದಾಳಿಯಲ್ಲಿ ಸುಭಾಶ್ ಯಾದವ್ ಗೆ ಸೇರಿದ್ದ 1.5ರಿಂದ 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಾಜಿಯಾಬಾದ್ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಸುಭಾಷ್ ಯಾದವ್ ವಿರುದ್ಧ ದೆಹಲಿ-ಎನ್ ಸಿಆರ್ ಪ್ರದೇಶದ ಹಲವಾರು ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಅಧಿಕ ಎಫ್ ಐಆರ್ ದಾಖಲಾಗಿದ್ದು ಆತನ ಪುತ್ರ ಮೋನಿಲ್ ಯಾದವ್ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.