ಮೈಸೂರು,ಸೆ.19(DaijiworldNews/HR): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೀರಾವೇಶದಿಂದ ಮೈಸೂರಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಸೆ. 21ರಂದು ಅಧಿವೇಶನ ಆರಂಭವಾಗಲಿದ್ದು, ಸದನದೊಳಗೂ ಅಷ್ಟೇ ವೀರಾವೇಶದಿಂದ ಉತ್ತರ ನೀಡುವಂಥ ಶಕ್ತಿಯನ್ನು ದೇವರು ನಮಗೂ ನೀಡಿದ್ದಾನೆ' ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ಸತ್ತಿದೆ, ಸಚಿವರೂ ಕೆಲಸ ಮಾಡುತ್ತಿಲ್ಲ, ಇಬ್ಬಿಬ್ಬರು ಮುಖ್ಯಮಂತ್ರಿ ಇದ್ದಾರೆ ಎಂಬ ವಿಧಾನಸಭೆ ಹೇಳಿಕೆಗೆ ಸೋಮಶೇಖರ್ ಈ ರೀತಿ ತಿರುಗೇಟು ನೀಡಿದ್ದಾರೆ.
ಇನ್ನು ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾವು ಆಡಳಿತ ಪಕ್ಷದವರು ಆಡಳಿತ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ' ಎಂದು ಹೇಳಿದರು.