ಲಕ್ನೋ, ಸೆ.19(DaijiworldNews/HR): ಫಿಲಂ ಸಿಟಿ ನಿರ್ಮಿಸಲು ಉತ್ತರ ಪ್ರದೇಶದ ನೋಯ್ಡಾದಲ್ಲಿ ಸರ್ಕಾರ ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ದೇಶಕ್ಕೆ ಒಂದು ಉತ್ತಮವಾದ ಫಿಲಂ ಸಿಟಿ ಅವಶ್ಯಕತೆಯಿದ್ದು, ಅದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಇನ್ನು ಅತ್ಯದ್ಭುತವಾದ ಫಿಲಂ ಸಿಟಿ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು, ಗ್ರೇಟರ್ ನೋಯ್ಡಾ ಅಥವಾ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸ್ಥಾಪಿಸಲಾಗುವುದು. ನಿರ್ಮಾಪಕರಿಗೆ ಫಿಲಂ ಸಿಟಿ ಉತ್ತಮ ಅವಕಾಶ ಕಲ್ಪಿಸಲಿದ್ದು, ಹಲವು ಮಂದಿಗೆ ಉದ್ಯೋವಕಾಶ ಸಿಗಲಿದೆ, ಇದಕ್ಕಾಗಿ ಶೀಘ್ರವೇ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.