ನವದೆಹಲಿ, ಸೆ. 19 (DaijiworldNews/MB) : ಪತ್ರಕರ್ತನಿಗೆ ಹಣ ನೀಡಿ ಗೂಢಚರ್ಯೆಗೆ ಬಳಸಿದ ಚೀನಾದ ಮಹಿಳೆ ಮತ್ತು ನೇಪಾಳಿ ಪ್ರಜೆ ಬಂಧನ ಮಾಡಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತ ರಾಜೀವ್ ಶರ್ಮಾ ಅವರಿಗೆ ಹಣ ನೀಡಿ ಚೀನಾದ ಮಹಿಳೆ ಹಾಗೂ ಆಕೆಯ ನೇಪಾಳದ ಸಹಚರನನ್ನು ಬಂಧಿಸಲಾಗಿದೆ.
ನಕಲಿ ಕಂಪನಿಗಳ ಅಕೌಂಟ್ನಿಂದ ಈ ಪತ್ರಕರ್ತ ರಾಜೀವ್ ಶರ್ಮಾಗೆ ಚೀನಾ ಮತ್ತು ನೇಪಾಳದ ಬಂಧಿತ ನಾಗರಿಕರು ದೊಡ್ಡಮೊತ್ತದ ಹಣ ಪಾವತಿಸಿದ್ದರು. ಈ ಆರೋಪಿಗಳಿಂದ ಹಲವಾರು ಮೊಬೈಲ್ ಫೋನ್ಗಳು, ಲಾಪ್ಟಾಪ್ಗಳು ಹಾಗೂ ಇತರ ಸೂಕ್ಷ್ಮ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಜೀವ್ ಯಾದವ್ ತಿಳಿಸಿದ್ದಾರೆ.
ನವದೆಹಲಿಯ ಪಿತಾಂಪುರ ನಿವಾಸಿ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿ ಪೊಲೀಸ್ ವಕ್ತಾರರು ಬಂಧಿಸಿದ್ದು ಇದೀಗ ಈ ಇಬ್ಬರು ವಿದೇಶದ ಪ್ರಜೆಗಳನ್ನು ಬಂಧಿಸಲಾಗಿದೆ.
ಶರ್ಮಾ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಅವರು ಹೊಂದಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ವಿವಿಧ ಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ರಾಜೀವ್ ಶರ್ಮಾರನ್ನು ಸೋಮವಾರ ಬಂಧಿಸಿ ಮರುದಿನ ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಪ್ರಸ್ತುತ ಶರ್ಮಾನನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ.
ಬಂಧನದ ನಂತರ, ಅವರ ಟ್ವಿಟ್ಟರ್ ಖಾತೆಯನ್ನು ಸಹ ನಿರ್ಬಂಧಿಸಲಾಗಿದೆ. ಶರ್ಮಾರ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಿದ್ದು ಆದ್ದರಿಂದ ನಿರ್ಬಂಧಿಸಲಾಗಿದೆ ಎಂದು ಟ್ವೀಟರ್ ತಿಳಿಸಿದೆ.
ಶರ್ಮಾನ ಅವರ ಇಸ್ರೇಲ್ನ ವಿವಾದಿತ ಸ್ಪೈವೇರ್ ಪೆಗಾಸಸ್ ಬಳಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಬಂಧನದ ಬಳಿಕ ಅವರು ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತನಿಖೆ ನಡೆಸಿದ್ದರು.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಶರ್ಮಾ ಅವರು ಹೊಂದಿದ್ದರು ಎಂದು ತಿಳಿದು ಬಂದಿದ್ದು ಈ ಮಾಹಿತಿಯನ್ನು ಹೇಗೆ ಸಂಗ್ರಹಿಸಿದರು, ಚೀನಾಕ್ಕೆ ಈ ಎಷ್ಟು ಸಮಯದವರೆಗೆ ರವಾನಿಸುತ್ತಿದ್ದರು ಎಂದು ತಿಳಿಯಲು ಶರ್ಮಾ ಅವರು ವಿಚಾರಣೆ ನಡೆಸಲಾಗುತ್ತಿದೆ.