ನವದೆಹಲಿ, ಸೆ. 19 (DaijiworldNews/MB) : ಆರ್ಥಿಕ ದುಸ್ಥಿತಿ, ಜಿಡಿಪಿ ಕುಸಿತ ಮೊದಲಾದ ವಿಚಾರದಲ್ಲಿ ಸದಾ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿ ಬಹು ದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಕಾಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ರಾಹುಲ್ ಅವರು, ''ನಿರುದ್ಯೋಗ ಹೆಚ್ಚುತ್ತಿದೆ, ಯಾಕೆಂದರೆ ಆಡಳಿತದಲ್ಲಿದೆ ಮೋದಿ ಸರ್ಕಾರ'' ಎಂದು ಟೀಕೆ ಮಾಡಿದ್ದು ದೇಶದಲ್ಲಿ ಎಂಜಿನಿಯರ್ಗಳು, ಶಿಕ್ಷಕರು, ಅಕೌಂಟೆಂಟ್ಗಳು ಕಳೆದ ನಾಲ್ಕು ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ವರದಿಯೊಂದನ್ನು ಉಲ್ಲೇಖಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 70 ನೇ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಟ್ವೀಟರ್ನಲ್ಲಿ ಮೋದಿ ಹುಟ್ಟು ಹಬ್ಬದ ಶುಭ ಹಾರೈಕೆಗಳು ಟ್ರೆಂಡ್ ಆಗುತ್ತಿರುವ ನಡುವೆಯೇ #National_Unemployment_Day ಕೂಡಾ ಟ್ರೆಂಡ್ ಆಗಿತ್ತು. ಇದಕ್ಕೂ ಹಲವು ದಿನಗಳ ಮೊದಲೇ ಟ್ವೀಟರ್ನಲ್ಲಿ ನಿರುದ್ಯೋಗದ ವಿಚಾರದಲ್ಲಿ ಜನರ ಆಕ್ರೋಶ ವ್ಯಕ್ತವಾಗುತ್ತಲ್ಲೇ ಇದ್ದು ರಾಹುಲ್ ಗಾಂಧಿ ಕೂಡಾ ನಿರುದ್ಯೋಗ ಸಮಸ್ಯೆಯ ವಿರುದ್ದ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಉದ್ಯೋಗವು ಘನತೆಯಾಗಿದ್ದು, ಸರ್ಕಾರ ಇದನ್ನು ಎಷ್ಟು ದಿನ ನಿರಾಕರಿಸುತ್ತದೆ? ಎಂದು ಪ್ರಶ್ನಿಸಿದ್ದರು.