ಜಮ್ಮು,ಸೆ.20 (DaijiworldNews/HR): ಪಾಕಿಸ್ತಾನ ಗಡಿಯಿಂದ ಭಾರತಕ್ಕೆ ನುಸುಳಿ ಬರುತ್ತಿದ್ದ ಡ್ರಗ್ಸ್ ಹಾಗೂ ಪಿಸ್ತೂಲ್ಗಳನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ.
ಗಡಿಯ ಮೂಲಕ ಭಾರತಕ್ಕೆ 58 ಪ್ಯಾಕೆಟ್ಗಳ ಮಾದಕ ದ್ರವ್ಯ ಹಾಗೂ ಎರಡು ಪಿಸ್ತೂಲ್ಗಳನ್ನು ನುಸುಳುವ ಪ್ರಯತ್ನ ಮಾಡಲಾಗಿತ್ತು. ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಯೋಧರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಗಡಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಆರ್ ಎಸ್ ಪುರ ಸೆಕ್ಟರ್ನ ಅರ್ನಿಯಾ ಪ್ರದೇಶದಲ್ಲಿ ಕಳ್ಳಸಾಗಾಣಿಕೆದಾರರು ಇಂಥ ಕುಕೃತ್ಯಕ್ಕೆ ಕೈಹಾಕಿದ್ದರು. ಅದನ್ನು ತಡೆಗಟ್ಟುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ಇನ್ನು ನಸುಕಿನ ವೇಳೆ ಸ್ಥಳವನ್ನು ಪರಿಶೀಲನೆ ಮಾಡಿದಾಗ, ಡ್ರಗ್ಸ್, ಕೆಲವು ಪತ್ರಿಕೆಗಳು ಹಾಗೂ ಪಿಸ್ತೂಲ್ಗಳು ಅಲ್ಲಿ ಇರುವುದು ತಿಳಿದುಬಂದಿದೆ. ಇವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.