ಮಧ್ಯಪ್ರದೇಶ, ಸೆ.20 (DaijiworldNews/HR): ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
ಉಪಚುನಾವಣೆಯು 28 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿದ್ದು, ಈ ಪೈಕಿ ಬಹುತೇಕ ಸ್ಥಾನಗಳು ಗ್ವಾಲಿಯರ್ ಹಾಗೂ ಚಂಬಲ್ ಪ್ರದೇಶದಲ್ಲಿದ್ದು, ಇವು ಈಗ ಬಿಜೆಪಿ ಸೇರಿರುವ ಮಾಜಿ ಕಾಂಗ್ರೆಸ್ಸಿಗ, ಸಚಿನ್ ಪೈಲಟ್ ಅವರ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಭದ್ರಕೋಟೆಯೆಂದೇ ಗುರುತಿಸಿಕೊಂಡಿವೆ.
ಇನ್ನು ಸಚಿನ್ ಪೈಲಟ್ ಅವರನ್ನು ಮಧ್ಯಪ್ರದೇಶದ ಕಾಂಗ್ರೆಸ್ ಪರ ಪ್ರಚಾರ ಮಾಡುವಂತೆ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮನವಿ ಮಾಡಿಕೊಂಡಿದ್ದು, ಇದಕ್ಕೆ ಪೈಲಟ್ ಸಹ ಒಪ್ಪಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.