ಎರ್ನಾಕುಲಂ ಸೆ.21 (DaijiworldNews/HR): ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿರುವ ಕ್ವಾರಿಯಲ್ಲಿ ಸ್ಪೋಟ ಸಂಭವಿಸಿದ್ದು ಘಟನೆಯಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ಫೋಟಕಗಳನ್ನು ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ ಇಲ್ಲಿನ ಕಟ್ಟಡದಲ್ಲಿ ಸಂಗ್ರಹಿಸಡಲಾಗಿತ್ತು. ಆದರೆ ಈ ಸ್ಫೋಟಕಗಳು ಇಂದು ಮುಂಜಾನೆ ಸ್ಫೋಟಿಸಿ ಕಟ್ಟಡದೊಳಗಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೃತರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ ಡಿ ನಾಗ ಎಂದು ಗುರುತಿಸಲಾಗಿದೆ.
ಕಲಾಡಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.