ನವದೆಹಲಿ, ಸೆ 21(Daijiworld News/PY): ಕೊರೊನಾ ಸೋಂಕಿಗೆ ಲಸಿಕೆ ಕಲ್ಪಿಸಲು ಕಾರ್ಯನಿರ್ವಹಿಸುತ್ತಿರುವ 30 ಕಂಪೆನಿಗಳಲ್ಲಿ 3 ಕಂಪೆನಿಗಳು ಅಂತಿಮ ಹಂತದಲ್ಲಿವೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಲೋಕಸಭೆಗೆ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ನೀಡಿರುವ ಅವರು, ಸುಮಾರು 145 ಕೊರೊನಾ ಲಸಿಕೆಯ ಅಭಿವೃದ್ದಿ ಕಂಪೆನಿಗಳು ವಿಶ್ವದಾತ್ಯಂತ ಇವೆ. ಅಲ್ಲದೇ, ಇವುಗಳನ್ನು ವೈದ್ಯಕೀಯ ರೀತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡಲು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸುಮಾರು 50,000 ವೆಂಟಿಲೇಟರ್ಗಳ ತಯಾರಿಕೆಗೆ ನಿಧಿಯಿಂದ 893.93 ಕೋಟಿ ರೂ ದೊರಕಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ಮನವಿ ಮಾಡಿದ್ದು, ಕೊರೊನಾ ಸೋಂಕಿನಿಂದ ದೇಶದ ಜನರನ್ನು ಕಾಪಾಡುವ ನಿಟ್ಟಿನಲ್ಲಿ ಸಕಾರಾತ್ಮಕವಾದ ಚರ್ಚೆ ನಡೆಸಿ, ಪರಿಪೂರ್ಣವಾದ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.