ನವದೆಹಲಿ, ಸೆ. 21 (DaijiworldNews/MB) : ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೋರಲು ಅವಿಶ್ವಾಸ ನಿಲುವಳಿಯನ್ನು ಮಂಡಿಸಲು 12 ವಿಪಕ್ಷಗಳು ಒಗ್ಗೂಡಿದೆ.
ತೀವ್ರ ವಿರೋಧಕ್ಕೆ ವ್ಯಕ್ತವಾಗಿರುವ ಕೃಷಿ ಮಸೂದೆಗಳ ಬಗ್ಗೆ ಚರ್ಚೆಯನ್ನು ಮುಂದುವರಿಸುವಂತೆ ವಿಪಕ್ಷಗಳು ಭಾನುವಾರ ಮನವಿ ಮಾಡಿದ್ದು ಈ ವೇಳೆ ಶನಿವಾರದ ಅಧಿವೇಶವನ್ನು ಅಪರಾಹ್ನ 1 ಗಂಟೆಯ ನಂತರವೂ ಮುಂದುವರಿಸಲು ಉಪಸಭಾಪತಿ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ವಿಪಕ್ಷಗಳು ಈಗ ಅವಿಶ್ವಾಸ ನಿಲುವಳಿಯನ್ನು ಮಂಡಿಸಲು ಜತೆಯಾಗಿದೆ. ಸಂಸದರೂ ವಕೀಲರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ ಹಾಗೂ ಕೆಟಿ ಎಸ್ ತುಳಸಿ ಸಿದ್ದಪಡಿಸಿರುವ ಈ ನಿರ್ಣಯವನ್ನು ಕಾಂಗ್ರೆಸ್, ಟಿಎಂಸಿ, ಸಿಪಿಐಎಂ, ಡಿಎಂಕೆ, ಆರ್ಜೆಡಿ, ಸಿಪಿಐ, ಆಪ್, ಟಿಆರ್ಎಸ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಎಂ) ಹಾಗೂ ಎಸ್ಪಿ ಪಕ್ಷಗಳು ಈ ನಿಲುವಳಿಯನ್ನು ಬೆಂಬಲಿಸಿದೆ.
ವಿಪಕ್ಷವು ತಮ್ಮ ನಿರ್ಣಯದಲ್ಲಿ ರಾಜ್ಯಸಭಾ ಉಪಸಭಾಪತಿಯವರು ಎಲ್ಲಾ ನಿಯಮಗಳನ್ನು, ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದು ಕೃಷಿ ಮಸೂದೆಯ ವಿರೋಧಿಸುವವರಿಗೆ ಮಾತನಾಡುವ ಅವಕಾಶವನ್ನು ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ.
ಈ ನಡುವೆ ಭಾನುವಾರ ಸದನದಲ್ಲಿ ಉಂಟಾದ ಗದ್ದಲಕ್ಕೆ ಸಂಬಂಧಿಸಿ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ.