ನವದೆಹಲಿ, ಸೆ. 21 (DaijiworldNews/MB) : ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಕೃಷಿ ಮಸೂದೆ ವಿರುದ್ದ ಮಾತನಾಡುವವರಿಗೆ ಅವಕಾಶ ನೀಡದೆ ಎಲ್ಲಾ ನಿಯಮಗಳನ್ನು, ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ಎಂದು 12 ವಿಪಕ್ಷಗಳು ಅವಿಶ್ವಾಸ ನಿಲುವಳಿ ಮಂಡಿಸಿದ್ದು ಇದನ್ನು ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದಾರೆ.
ಭಾನುವಾರ ನಡೆದ ಘಟನೆಯಿಂದ ಬಹಳ ನೋವಾಗಿದೆ. ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಇದು ರಾಜ್ಯಸಭೆಗೆ ಕೆಟ್ಟ ದಿನ. ಉಪ ಸಭಾಪತಿಗೆ ದೈಹಿಕ ಬೆದರಿಕೆ ಹಾಕಲಾಗಿದ್ದು ನನಗೆ ಅವರ ಆರೋಗ್ಯದ ಚಿಂತೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ವಿಪಕ್ಷಗಳು ಸಭಾಪತಿಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸದನ ಆರಂಭವಾಗಿದ್ದು ಪುನಃ ಗದ್ದಲ ಉಂಟಾಗಿದ್ದ ಇನ್ನೂ 30 ನಿಮಿಷಗಳ ಕಾಲ ಮುಂದೂಡಲಾಗಿದೆ.
8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ.