ಬೆಂಗಳೂರು, ಸೆ.21 (DaijiworldNews/HR): ಇಂದಿನಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಮೊದಲ ದಿನದ ಆರಂಭದಲ್ಲಿ ಮೃತಪಟ್ಟ ಅನೇಕ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸುವ ಪ್ರಸ್ತಾಪವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಅನೇಕ ಮುನ್ನೆಚರಿಕೆಯ ಕ್ರಮಗಳೊಂದಿಗೆ ರಾಜ್ಯ ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದೆ.
ಅಧಿವೇಶನದಲ್ಲಿ ಇತ್ತೀಚೆಗೆ ಮೃತಪಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಕೇಂದ್ರ ಸಚಿವ ಎಂವಿ ರಾಜಶೇಖರನ್, ಶಿರಾ ಶಾಸಕರಾಗಿದ್ದ ಸತ್ಯನಾರಾಯಣ, ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ, ಹಿರಿಯ ಕವಿ ಡಾ.ಕೆಎಸ್ ನಿಸಾರ್ ಅಹ್ಮದ್, ಯಕ್ಷಗಾನ ಕಲಾವಿದ ಹೊಸ್ದೋಟ ಗಜಾನನ ಭಟ್, ಎಡನೀರು ಕೇಶವಾನಂದ ಭಾರತೀ ಸ್ವಾಮಿ ಸೇರಿದಂತೆ ಅನೇಕ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.