ಬೆಂಗಳೂರು, ಸೆ 21(Daijiworld News/PY): ಮಾರ್ಚ್ನಲ್ಲಿ ದೆಹಲಿಯ ಜಮಾತ್ ಪ್ರದೇಶದಲ್ಲಿ ನಡೆದ ತಬ್ಲೀಗಿ ಕಾರ್ಯಕ್ರಮದ ಬಳಿಕ ಕೊರೊನಾ ಸೋಂಕು ಹಲವಾರು ಮಂದಿಗೆ ಹರಡು ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.
ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 29ರಿಂದ ದೆಹಲಿ ಪೊಲೀಸರು ಸುಮಾರು 233 ತಬ್ಲೀಗಿ ಜಮಾತ್ ಸದಸ್ಯರನ್ನು ಬಂಧಿಸಿದ್ದಾರೆ. 2,361 ಮಂದಿಯನ್ನು ತೆರವು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಬಗ್ಗೆ ವಿಚಾರಣೆ ನಡೆಯುತ್ತಿದೆ. ದೆಹಲಿ ಪೊಲೀಸರು ಹೇಳಿದಂತೆ, ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ನಿರ್ಬಂಧ ವಿಧಿಸಲಾಗಿದ್ದರೂ ಕೂಡಾ ಸಮಾವೇಶ ನಡೆಸಿದ್ದಾರೆ. ಅಲ್ಲದೇ, ಸಾಮಾಜಿಕ ಅಂತರ ಸೇರಿದಂತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಬಳಸಿಲ್ಲ. ಇದು ಹಲವು ಮಂದಿಗೆ ಕೊರೊನಾ ಹರಡಲು ಕಾರಣವಾಯಿತು ಎಂದು ತಿಳಿಸಿದ್ದಾರೆ.