ನವದೆಹಲಿ,ಸೆ.21 (DaijiworldNews/HR): ರೈತ ಆತ್ಮಹತ್ಯೆಗಳ ವಿವರಗಳನ್ನು ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿಲ್ಲ. ಹೀಗಾಗಿ ರೈತರ ಆತ್ಮಹತ್ಯೆಯ ಕಾರಣಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಮಾಹಿತಿಯನ್ನು ಒಪ್ಪಲಾಗದು ಮತ್ತು ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇನ್ನು ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತ ಇತ್ತೀಚಿನ ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ, 2019 ರಲ್ಲಿ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕ್ಷೇತ್ರದ ಆತ್ಮಹತ್ಯೆ ಪ್ರಮಾಣವು ದೇಶದ ಒಟ್ಟು ಆತ್ಮಹತ್ಯೆಗಳಲ್ಲಿ ಶೇಕಡಾ 7.4 ರಷ್ಟಿದೆ ಎಂದು ಹೇಳಲಾಗಿತ್ತು.
ಈ ಕುರಿತಂತೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಎನ್ಸಿಆರ್ಬಿ ತಿಳಿಸಿದಂತೆ ಪರಿಶೀಲನೆಗಳ ನಂತರವೂ ಹಲವು ರಾಜ್ಯಗಳು ರೈತರ ಆತ್ಮಹತ್ಯೆ ಕುರಿತಂತೆ ವರದಿಯನ್ನೆ ನೀಡಿಲ್ಲ. ಈ ಮಿತಿಯಿಂದಾಗಿ, ರೈತರ ಆತ್ಮಹತ್ಯೆಯ ಕಾರಣಗಳ ಕುರಿತ ರಾಷ್ಟ್ರೀಯ ಮಾಹಿತಿಯು ಒಪ್ಪಿತವಾಗಿಲ್ಲ ಮತ್ತು ಪ್ರಕಟಿಸಲಾಗಿಲ್ಲ ಎಂದು ತಿಳಿಸಿದ್ದಾರೆ.