ಬೆಂಗಳೂರು, ಸೆ 21(Daijiworld News/PY): ವಿಧಾನಸಭೆಯ ಮುಂಭಾಗದ ಮೊಗಸಾಲೆಯಲ್ಲಿ ಸೋಮವಾರ ಕಡೂರು ಶಾಸಕ ಬೆಳ್ಳಿಪ್ರಕಾಶ್ ಹಾಗೂ ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಅವರ ಮಧ್ಯೆ ಗಲಾಟೆ ನಡೆದಿದ್ದು, ಹೊಡೆದಾಟದ ಹಂತಕ್ಕೆ ತಲುಪಿತ್ತು.
ತೋಟಗಾರಿಕೆ ಇಲಾಖೆಯಿಂದ ಕಡೂರು ಕ್ಷೇತ್ರಕ್ಕೆ ನೀಡಬೇಕಿದ್ದ ಅನುದಾನದ ತಾರತಮ್ಯದ ಹಿನ್ನೆಲೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಆವರಿಗೆ ಏಕ ವಚದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಬಳಿಕ ಹೊಡೆದಾಟಕ್ಕೂ ಮುಂದಾಗಿದ್ದ ಇಬ್ಬರನ್ನು ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಬಿಡಿಸಿದ್ದಾರೆ.
ಗಲಾಟೆ ನಡೆಯುವ ಸಂದರ್ಭ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆ.ಎಸ್.ಈಶ್ವರ್ಪಪ ಹಾಗೂ ಸೋಮಣ್ಣ ಇದ್ದರು.