ನವದೆಹಲಿ, ಸೆ. 21 (DaijiworldNews/MB) : ಕೃಷಿ ಮಸೂದೆಗಳು ಕೃಷಿ ಮಾರುಕಟ್ಟೆಗೆ ವಿರುದ್ದವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಅನುಮೋದನೆಯಾಗಿರುವ ಕೃಷಿ ಮಸೂದೆಯ ವಿರುದ್ದ ದೇಶದಾದ್ಯಂತ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಲ್ಲಿದ್ದು ಪಂಜಾಬ್ ಸರ್ಕಾರ ಈ ಮಸೂದೆಯನ್ನು ರೈತ ವಿರೋಧಿಯೆಂದು ಕರೆದಿದ್ದು ನ್ಯಾಯಾಲಯದ ಕದ ತಟ್ಟಲು ನಿರ್ಧರಿಸಿದೆ. ರಾಜ್ಯ ಸಭೆಯಲ್ಲೂ ಈ ಮಸೂದೆಯ ವಿರುದ್ದವಾಗಿ ಗದ್ದಲಗಳು ಎದ್ದಿವೆ.
ಭಾನುವಾರ ಈ ಮಸೂದೆಯ ಬಗ್ಗೆ ತಿಳಿಸಿದ್ದ ಪ್ರಧಾನಿ ಮೋದಿಯವರು, ಕೃಷಿ ಮಸೂದೆಗಳಿಂದ ರೈತರಿಗೆ ತೊಂದರೆಯಾಗಲ್ಲ, ಇದೊಂದು ದೊಡ್ಡ ತಿರುವು ಎಂದು ಹೇಳಿದ್ದರು. ಹಾಗೆಯೇ ರೈತರಿಗೆ ಬೆಂಬಲ ಬೆಲೆ ದೊರೆಯುತ್ತದೆ ಎಂದು ಕೂಡಾ ತಿಳಿಸಿದ್ದರು. ಬಳಿಕವೂ ಈ ಮಸೂದೆಯ ವಿರುದ್ದದ ಧ್ವನಿ ತಣ್ಣಗಾಗಿಲ್ಲ.
ಸೋಮವಾರ ಬಿಹಾರದಲ್ಲಿ 14,258 ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 9 ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಮಸೂದೆಗಳು 21ನೇ ಶತಮಾನದ ಭಾರತದ ಮುಖ್ಯ. ಕೃಷಿ ಸಂಬಂಧಿಸಿ ಹೊರಡಿಸಲಾದ ಸುಗ್ರೀವಾಜ್ಞೆ ಬಳಿಕ ಬಹುತೇಕ ರಾಜ್ಯದಲ್ಲಿ ರೈತರ ಬಾಳು ಹಸನಾಗಿದೆ ಎಂದು ಹೇಳಿದ್ದು ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ ಮುಂದುವರಿಯುವ ಬಗ್ಗೆ ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.