ಬೆಂಗಳೂರು, ಸೆ.21 (DaijiworldNews/HR): ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜೀತ್ ಲಂಕೇಶ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಆ ನಿರ್ದೇಶಕನ ಮಗನನ್ನು ಇಷ್ಟು ದಿನವಾದ್ರು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಇಂದ್ರಜೀತ್, ಸಿಸಿಬಿ ಅಧಿಕಾರಿಗಳ ಮೇಲೆ ನನಗೆ ತುಂಬಾನೇ ನಂಬಿಕೆ ಇಟ್ಟಿದ್ದೆ. ಆದರೆ ಅವ್ರು ಮಾಡುತ್ತಿರುವವುದನ್ನ ನೋಡ್ತಿದ್ರೆ ಕೇವಲ ಹೆಸರಿಗಷ್ಟೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅನ್ನಿಸುತ್ತಿದೆ. ಅಧಿಕಾರಿಗಳಿಗೆ ತುಂಬಾ ಮಾಹಿತಿ ನೀಡಿದ್ದೇ. ಇನ್ನೂ ಖ್ಯಾತ ನಿರ್ದೇಶಕನ ಮಗ ಮತ್ತು ಸರ್ಕಾರಿ ಅಧಿಕಾರಿಯ ಮಗ ಕೂಡ ಈ ದಂಧೆಯಲ್ಲಿದ್ದಾರೆ. ಆದರೆ ಇಷ್ಟು ದಿನವಾದ್ರು ಅವರನ್ನು ಬಂಧಿಸಿಲು ಆಗಲಿಲ್ಲವೆ ಎಂದಿದ್ದಾರೆ.
ಈ ಡ್ರಗ್ಸ್ ದಂಧೆ ಪ್ರಕರಣವನ್ನು ಲವ್ ಜಿಹಾದ್ ಅನ್ನೋ ಹೆಸ್ರಿನಿಂದ ತಿರುಚಿವ ಪ್ರಯತ್ನ ನಡೆಯುತ್ತಿದೆ. ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಜೊತೆಗೆ ರಾಗಿಣಿಯ ಕೇಸು ಮುಚ್ಚಿಹಾಕಲು ಪ್ರಯಶ್ನಿಸುತ್ತಿರುವ ಆ ಪ್ರಭಾವಿ ರಾಜಕಾರಣಿಯನ್ನೂ ಕೂಡ ಬಂಧಿಸಬೇಕು ಎಂದು ಇಂದ್ರಜೀತ್ ಹೇಳಿದ್ದಾರೆ.