ಬೆಂಗಳೂರು, ಸೆ.21 (DaijiworldNews/HR): ಡ್ರಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಈ ಹಿನ್ನಲೆಯಲ್ಲಿ ಇನ್ನೂ ಮೂರು ದಿನ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಮತ್ತೆ ಮೂರುದಿನ ಕಾಲ ಪರಪ್ಪನ ಅಗ್ರಹಾರದಲ್ಲೇ ಕಳೆಯುವಂತಾಗಿದೆ.
ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶವನ್ನು ಕೇಳಿದ್ದು ಇದಕ್ಕೆ ಸಮ್ಮತಿಸಿದ ಕೋರ್ಟ್ ಸಂಜನಾ ಅರ್ಜಿ ವಿಚಾರಣೆಯನ್ನು ಮೂರು ದಿನಗಳ ಕಾಲ ಮುಂದೂಡಿತು. ರಾಗಿಣಿ ಪರ ವಾದ ಮಾಡಿದ ವಕೀಲ ರಾಗಿಣಿ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರಕಲಿಲ್ಲ, ಅಂತೆಯೇ ರಾಗಿಣಿ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು ಇದರಲ್ಲೂ ಯಾವುದೇ ಸಾಕ್ಷಿಗಳು ಅಧಿಕಾರಿಗಳಿಗೆ ದೊರೆಯಲಿಲ್ಲ ಹಾಗಾಗಿ ಇದೊಂದು ಸಂಚು ಎಂಬುದಾಗಿ ವಕೀಲರು ವಾದ ಮಾಡಿದ್ದಾರೆ.
ಇನ್ನು ಸಿಸಿಬಿ ಅಧಿಕಾರಿಗಳ ಹೇಳಿಕೆಯಂತೆ ನಟಿ ರಾಗಿಣಿಗೆ ಶ್ರೀಮಂತ ವ್ಯಕ್ತಿಗಳ ಪರಿಚವಿದ್ದು ಕೆಲವೊಂದು ಸಾಕ್ಷಿಗಳು ನಮ್ಮ ಬಳಿ ಇದೆ ಹಾಗಾಗಿ ಕೋರ್ಟ್ ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶಪಡಿಸುವ ಸಂಭವ ಹೆಚ್ಚಿದೆ ಹಾಗಾಗಿ ರಾಗಿಣಿಗೆ ಜಾಮೀನು ನೀಡಬಾರದು ಎಂದು ಹೇಳಿತ್ತು ಆದ ಕಾರಣ ಕೋರ್ಟ್ ರಾಗಿಣಿ ವಿಚಾರಣೆಯನ್ನೂ ಮೂರು ದಿನಗಳ ಕಾಲ ಮುಂದೂಡಿದೆ.