ನವದೆಹಲಿ, ಸೆ 21(Daijiworld News/PY): ಐಸ್ ಕ್ರೀಂ ತಯಾರಿಕ ಕಂಪೆನಿಯಾದ ಕ್ವಾಲಿಟಿ ಲಿಮಿಟೆಡ್ನ ವಿರುದ್ದ ಸೋಮವಾರ ಸಿಬಿಐ 1,400 ಕೋಟಿ ಮೊತ್ತದ ವಂಚನೆ ಪ್ರಕರಣ ದಾಖಲಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟದ ಬ್ಯಾಂಕುಗಳಿಗೆ 1,400 ಕೋಟಿ ಮೋಸ ಮಾಡಿದ್ದಕ್ಕಾಗಿ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ವಂಚನೆ ಪ್ರಕರಣ ದಾಖಲಿಸಿದೆ.
ಬ್ಯಾಂಕ್ ಆಫ್ ಇಂಡಿಯಾದ ದೂರಿನ ಪ್ರಕಾರ, ಈ ಪ್ರಕರಣ ದಾಖಲಾಗಿದೆ. ದೆಹಲಿ, ಬುಲಂದ್ಶಹರ್, ಸಹಾರನ್ಪುರ, ಅಜ್ಮೀರ್ ಮತ್ತು ಪಾಲ್ವಾಲ್ ಸೇರಿದಂತೆ ಎಂಟು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ.
ಕಂಪನಿಯ ನಿರ್ದೇಶಕರಾದ ಸಂಜಯ್ ಧಿಂಗ್ರಾ, ಸಿದ್ಧಾಂತ್ ಗುಪ್ತಾ ಮತ್ತು ಅರುಣ್ ಶ್ರೀವಾಸ್ತವ ಅವರ ಹೆಸರನ್ನು ಸಿಬಿಐ ಪ್ರಕರಣದಲ್ಲಿ ದಾಖಲಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.