ನವದೆಹಲಿ, ಸೆ 21(Daijiworld News/PY): ರಾಫೆಲ್ ಯುದ್ದ ವಿಮಾನವನ್ನು ನಿರ್ವಹಿಸಲು ಮಹಿಳಾ ಪೈಲಟ್ ಅನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಸ್ತುತ, ಆ ಮಹಿಳಾ ಪೈಲಟ್, ರಫೇಲ್ ಹಾರಾಟ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಿಗ್-21 ಯುದ್ದ ವಿಮಾನಗಳ ಹಾರಾಟ ನಡೆಸಿ ತಿಳಿದಿರುವ ಅವರನ್ನು ಆಂತರಿಕ ಪ್ರಕ್ರಿಯೆ ಮುಖಾಂತರ ರಫೇಲ್ ಸ್ಕ್ವಾಡ್ರನ್ಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿವೆ.
ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಯುದ್ದ ವಿಮಾನಗಳನ್ನು ಕಾರ್ಯಾಚರಿಸುವ 10 ಮಹಿಳಾ ಪೈಲಟ್ಗಳಿದ್ದು, 18 ನ್ಯಾವಿಗೇಟರ್ಗಳಿದ್ದಾರೆ. ಒಟ್ಟು 1,875 ಮಹಿಳಾ ಅಧಿಕಾರಿಗಳು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.