ವಿಶ್ವಸಂಸ್ಥೆ, ಸೆ. 22 (DaijiworldNews/MB) : ಸಮಗ್ರವಾದ ಸುಧಾರಣೆ ಇಲ್ಲದ ಕಾರಣದಿಂದಾಗಿ ವಿಶ್ವಸಂಸ್ಥೆ ಆತ್ಮವಿಶ್ವಾಸದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವಸಂಸ್ಥೆಯ 75 ನೇ ವರ್ಷಾಚರಣೆ ಅಂಗವಾಗಿ ನಡೆದ ಜನರಲ್ ಅಸೆಂಬ್ಲಿಯ ಉನ್ನತ ಮಟ್ಟದ ಸಭೆಯಲ್ಲಿ ವಿಡಿಯೂ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಮಾತನಾಡಿ ಕೆಲವು ಸಲಹೆಗಳನ್ನು ನೀಡಿದ್ದು 2021ರ ಜನವರಿ ಒಂದರಿಂದ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಚುನಾಯಿತ ಸದಸ್ವತ್ವ ಹುದ್ದೆಯನ್ನು ಹೊಂದಿರುವ ಹಿನ್ನೆಲೆ ಭಾರತದ ಹೇಳಿಕೆಗಳು ಮಹತ್ವವನ್ನು ಪಡೆದಿದೆ.
ಸಮಗ್ರವಾದ ಸುಧಾರಣೆ ಇಲ್ಲದ ಕಾರಣದಿಂದಾಗಿ ವಿಶ್ವಸಂಸ್ಥೆ ಆತ್ಮವಿಶ್ವಾಸದ ಬಿಕ್ಕಟ್ಟು ಎದುರಿಸುತ್ತಿದೆ. ಇಂದು ಪ್ರಸ್ತುತ ಸವಾಲುಗಳನ್ನು ಎದುರಿಸುವ, ಹಕ್ಕುದಾರರಿಗೆ ಧ್ವನಿ ನೀಡುವ, ಮಾನವ ಕುಲದ ಕಲ್ಯಾಣದ ಗುರಿ ಹೊಂದಿರುವ ಸುಧಾರಿತ ಬಹುತ್ವವಾದ ಇಡೀ ವಿಶ್ವಕ್ಕೇ ಮುಖ್ಯವಾಗಿದೆ. ಪ್ರಸ್ತುತವಲ್ಲದ ಸಂರಚನೆಯಿಂದ ನಾವು ಇಂದಿನ ಸವಾಲುಗಳ ವಿರುದ್ದ ಹೋರಾಟ ನಡೆಸಲು ಸಾಧ್ಯವಾಗದು ಎಂದು ವಿಶ್ವಸಂಸ್ಥೆಗೆ ಸಲಹೆ ನೀಡಿದ್ದಾರೆ.