ಭೋಪಾಲ್, ಸೆ 22(Daijiworld News/PY): ಪೋಷಕರು ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭ 19 ವರ್ಷದ ಯುವಕನೋರ್ವ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಯುವಕ ಹತ್ತಿರದ ಸಂಬಂಧಿಯಾಗಿದ್ದು, ಅತ್ಯಾಚಾರವೆಸಗಿ ಪರಾರಿಯಾಗಲು ಯತ್ನಿಸಿದ್ದ. ಆದರೆ, ಈ ಸಂದರ್ಭ ಯುವಕನನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಈ ವೇಳೆ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಈ ಯುವಕ ಜಬಲ್ಪುರದ ಕಾತಂಗಿಯಿಂದ ಬಂದಿದ್ದು, ಸಂಬಂದಿಯಾಗಿದ್ದ ಈತನಿಗೆ ಅಡುಗೆ ಮಾಡುವ ನಿಟ್ಟಿನಲ್ಲಿ ಮಗುವಿನ ಪೋಷಕರು ತರಕಾರಿ ಖರೀದಿಗೆಂದು ಮಾರ್ಕೆಟ್ಗೆ ತೆರಳಿದ್ದಾರೆ. ಮಾರ್ಕೆಟ್ಗೆ ಹೋಗುವ ವೇಳೆ ತನ್ನ ಇಬ್ಬರು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು, 2 ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು.
ಮಾರ್ಕೆಟ್ನಿಂದ ವಾಪಾಸ್ಸಾದ ವೇಳೆ ಮಗುವಿಗೆ ಗಾಯಗಳಾಗಿದ್ದು, ಮಗು ಅಳುತ್ತಿತ್ತು. ಆದರೆ, ಈ ವೇಳೆ ಮನೆಗೆ ಬಂದ ಸಂಬಂಧಿ ಪರಾರಿಯಾಗಿದ್ದಾನೆ. ಈ ಸಂದರ್ಭ ಅವರ ಇನ್ನೋರ್ವ ಮಗಳು ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಲಾಗಿದೆ.
ಘಟನೆಯ ಬಗ್ಗೆ ಕೋಪಗೊಂಡ ಗ್ರಾಮಸ್ಥರು ಪೊಲೀಸರು ಬರುವ ಮುನ್ನ ಯುವಕನನ್ನು ಬಂಧಿಸಿದ್ದಾರೆ.