ಬೆಂಗಳೂರು, ಸೆ 22(Daijiworld News/PY): ಸಂಸತ್ತಿನಲ್ಲಿ ಅನುಮೋದಿಸಲಾದ ಕೃಷಿ ಸುಧಾರಣಾ ಮಸೂದೆಯ ಕುರಿತಾಗಿ ಯಾವುದೇ ಗೊಂದಲ ಬೇಡ. ಇದು ಖಂಡಿತವಾಗಿಯೂ ರೈತರ ಪರವಾದ ಮಸೂದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ಸಂಸತ್ತಿನಲ್ಲಿ ಅನುಮೋದಿಸಲಾದ ಕೃಷಿ ಸುಧಾರಣಾ ಮಸೂದೆಯ ಕುರಿತಾಗಿ ಯಾವುದೇ ಗೊಂದಲ ಬೇಡ, ಇದು ಖಂಡಿತವಾಗಿಯೂ ರೈತರ ಪರವಾದ ಮಸೂದೆ. ಕಾಂಗ್ರೆಸ್ಸಿನ ಅಪಪ್ರಚಾರಕ್ಕೆ ಹೆಚ್ಚು ಆಯಸ್ಸು ಇಲ್ಲ, ಸದ್ಯದಲ್ಲಿಯೇ ರೈತರಿಗೆ ಇದರ ಅನುಕೂಲಗಳ ಅರಿವಾಗುತ್ತದೆ ಎಂದಿದ್ದಾರೆ.
ಕೃಷಿ ಸುಧಾರಣಾ ಮಸೂದೆಯ ಬಗ್ಗೆ ಯಾವುದೇ ರೀತಿಯಾದ ಗೊಂದಲ ಬೇಡ. ಪ್ರತಿಪಕ್ಷಗಳ ಅಪ್ರಚಾರದ ಬಗ್ಗೆ ಕಿವಿಗೊಡಬೇಡ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರವಾಗಿ ಇದ್ದ ಕಾರಣ ದೇಶದ ರೈತರಿಗೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅಲ್ಲದೇ, ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ರೂ.ಆರ್ಥಿಕ ನೆರವು ಕಲ್ಪಿಸುತ್ತಿದ್ದು, ಇದು ಹೇಗೆ ರೈತ ವಿರೋಧಿ ಕಾಯ್ದೆಯಾಗುತ್ತದೆ ಎಂದು ಕೇಳಿದ್ದಾರೆ.