ಬೆಂಗಳೂರು, ಸೆ 22(Daijiworld News/PY): ಕೊರೊನಾ ಸಂದರ್ಭ ಸರ್ಕಾರ ಚಾಲಕರು, ಕ್ಷೌರಿಕರು ಸೇರಿದಂತೆ ಹಲವರಿಗೆ ಸಹಾಯಧನ ಘೋಷಣೆ ಮಾಡಿತ್ತು. ಆದರೆ ಶೇ.10ರಷ್ಟು ಮಂದಿಗೆ ಈ ಸಹಾಯಧನ ಸರಿಯಾಗಿ ತಲುಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು, ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ಮಾತನಾಡಿದ್ದಕ್ಕೆ ಬಿಜೆಪಿ ನೋಟಿಸ್ ನೀಡಿತ್ತು. ಆದರೆ, ಇಂತಹ ನೋಟಿಸ್ಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಕೊರೊನಾ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದಿದ್ದಾರೆ.
ಕೊರೊನಾವನ್ನು ಯಾರೂ ಕೂಡಾ ನಿರೀಕ್ಷೆ ಮಾಡಿರಲಿಲ್ಲ. ವಿತ್ತ ಸಚಿವೆ ಇದನ್ನು ದೇವರ ಆಟ ಎಂದಿದ್ದಾರೆ. ಇನ್ನು ದೇಶದ ಪ್ರಧಾನ ಮಂತ್ರಿ ನಾಲ್ಕು ಗಂಟೆಯಲ್ಲಿ ಲಾಕ್ಡೌನ್ ಜಾರಿ ಮಾಡಿದ್ದಾರೆ. ಸಿಎಂ ಅವರು ಒಂದು ದಿನವಾದರೂ ಟೈಂ ನೀಡಿದ್ದರು. ಇನ್ನು ಬಿಐಇಸಿಯಲ್ಲಿ ಬೆಡ್ ಬಾಡಿಗೆ ಸರಿಯಿಲ್ಲ ಎಂದಿದ್ದಕ್ಕೆ ಸಿಎಂ ಅವರು ಕೂಡಲೇ ಅದನ್ನು ನಿಲ್ಲಿಸಿದ್ದಾರೆ. ಲಾಕ್ಡೌನ್ ವೇಳೆ ರೈತರಿಗೆ ಮಾರ್ಕೆಟ್ ಕಲ್ಪಿಸಿ ಕೊಡುತ್ತೇವೆ ಎಂದಿದ್ದೀರಿ. ಆದರೆ, ಖರೀದಿ ಎಲ್ಲಿ ಮಾಡಿದ್ದೀರಿ. ಖರೀದಿ ಬಗ್ಗೆ ಲೆಕ್ಕ ಕೊಡಿ ಎಂದು ಕೇಳಿದರು.
ಬಡವರಿಗೆ ಕಿಟ್ ಹಂಚುವ ವೇಳೆ ಕಿಟ್ ಮೇಲೆ ಫೋಟೋ ಹಾಕಿದ್ದಾರೆ. ಬಾಣಂತಿಯರಿಗೆ ಊಟ ನೀಡುವ ಪ್ಯಾಕೇಟ್ನ ಮೇಲೆ ಪಕ್ಷದ ಚಿಹ್ನೆ ಹಾಕಿಕೊಂಡು ಹಂಚಿದ್ದಾರೆ. ಆದರೆ, ಇದರಲ್ಲಿ ಸಿಎಂ ಅವರು ಭಾಗಿಯಾಗಿದ್ದಾರೆ ಎಂದು ಹೇಳಿಲ್ಲ. ಈ ಬಗ್ಗೆ ದೂರು ನೀಡಿದರೂ ಕೂಡಾ ಎಫ್ಐಆರ್ ದಾಖಲು ಮಾಡಿಲ್ಲ. ಬಡವರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಮೂರಷ್ಟು ಚಾರ್ಚ್ ಹಾಕಿದ್ಧಾರೆ. ಸಣ್ಣ-ಸಣ್ಣ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮಾನವೀಯತೆ ಇರಬೇಕು ಎಂದಿದ್ದಾರೆ.