ನವದೆಹಲಿ, ಸೆ 22(Daijiworld News/PY): ವಲಸೆ ಕಾರ್ಮಿಕರು, ರೈತರ ಆತ್ಮಹತ್ಯೆ, ಕೊರೊನಾ ಹಾಗೂ ಆರ್ಥಿಕತೆಯ ವಿಚಾರವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದಿ ನೇಮ್ ಚೇಂಜರ್ಸ್ ಎನ್ನುವ ಹೆಸರಿದ್ದ ಕಾರ್ಟೂನ್ ಪೋಸ್ಟರ್ ಅನ್ನು ಶೇರ್ ಮಾಡಿದ್ದು, ಈ ಪೋಸ್ಟ್ನಲ್ಲಿ ನಾಯಕರು ಎನ್ಡಿಎ ಎಂದರೆ ಡೇಟಾ ಲಭ್ಯವಿಲ್ಲ ಎನ್ನುವ ಫಲಕವನ್ನು ಹಿಡಿದಿದ್ದಾರೆ.
ವಲಸೆ ಕಾರ್ಮಿಕರು, ರೈತರ ಆತ್ಮಹತ್ಯೆ, ಕೊರೊನಾ ಹಾಗೂ ಆರ್ಥಿಕತೆಯ ವಿಚಾರವಾಗಿ ಯಾವುದೇ ಮಾಹಿತಿ ಇಲ್ಲ. ಹಣಕಾಸಿನ ವಿಚಾರವಾಗಿ ತಪ್ಪು ಮಾಹಿತಿ, ಕೊರೊನಾ ಸಾವಿನ ಬಗ್ಗೆ ಸಂಶಯಾಸ್ಪದ ಮಾಹಿತಿ, ಜಿಡಿಪಿ ಬೆಳವಣಿಗೆಯ ಬಗ್ಗೆ ಸ್ಪಷ್ಡವಿಲ್ಲದ ಮಾಹಿತಿ, ಈ ಸರ್ಕಾರವು ಎನ್ಡಿಪಿ ಪದಕ್ಕೆ ಸಂಪೂರ್ಣವಾಗಿ ಹೊಸ ಅರ್ಥವನ್ನು ಕೊಡುತ್ತದೆ ಎಂದು ಹೇಳಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಯ ಕಾರಣಗಳ ಬಗೆಗಿನ ವಿಚಾರವನ್ನು ಒಪ್ಪಲಾಗುವುದಿಲ್ಲ. ಹಾಗೂ ಅದನ್ನು ಪ್ರಕಟಪಡಿಸಲು ಕೂಡಾ ಆಗುವುದಿಲ್ಲ ಎಂದು ಸರ್ಕಾರ ಹೇಳಿದ ಒಂದು ದಿನದ ಬಳಿಕ ಟ್ವೀಟ್ ಮೂಲಕ ಶಶಿ ತರೂರು ಅವರು ಸರ್ಕಾರವನ್ನು ಲೇವಡಿ ಮಾಡಿದ್ದಾರೆ.