ಭೋಪಾಲ್, ಸೆ 23(Daijiworld News/PY): ರಾಜ್ಯ ಸರ್ಕಾರದ ವತಿಯಿಂದ ನಾಲ್ಕು ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಎರಡು ಕಂತೆಗಳಲ್ಲಿ ವರ್ಗಾವಣೆ ಮಾಡುವುದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘೋಷಣೆ ಮಾಡಿದ್ದಾರೆ.
ರೈತರ ಅಭಿವೃದ್ದಿಗಾಗಿ ಕಿಸಾನ್ ಸಮ್ಮನ್ ನಿಧಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಪ್ರಧಾನಿ ಬೆಳೆ ವಿಮೆಯಂತಹ ಯೋಜನೆಗಳನ್ನು ರೈತರ ಹಿತದೃಷ್ಟಿಯಿಂದ ನಡೆಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳನ್ನು ವಿಶೇಷ ಪ್ಯಾಕೇಜ್ ಆಗಿ ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯನ್ನು ಆರಂಭಿಲಾಗುತ್ತದೆ. ಈ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕವಾಗಿ ನಾಲ್ಕು ಸಾವಿರ ರೂ.ಗಳನ್ನು ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವರ್ಷದ ವೇಳೆಗೆ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ನಮ್ಮ ಸರ್ಕಾರ ನೆರವಾಗುತ್ತದೆ. ರೈತರು ಬೆಳೆದ ಬೆಳಗಳ ಖರೀದಿಗೆ 27 ಸಾವಿರ ರೂ.ಗಳನ್ನು ಖರ್ಚು ಮಾಡಲಿದ್ದೇವೆ ಎಂದಿದ್ದಾರೆ.