ಬಲ್ಲಿಯಾ, ಸೆ. 23 (DaijiworldNews/MB) : ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ 16 ವರ್ಷದ ಬಾಲಕಿಯೊಬ್ಬಳ ಖಾತೆಗೆ ಬರೋಬ್ಬರಿ 10 ಕೋಟಿ ರೂ. ಜಮೆಯಾಗಿದ್ದು ಬಾಲಕಿಗೆ ಆಶ್ಚರ್ಯ ಉಂಟಾಗಿದೆ.
ಸಾಂದರ್ಭಿಕ ಚಿತ್ರ
ತನ್ನ ಅಲಹಾಬಾದ್ ಬ್ಯಾಂಕ್ ಖಾತೆಗೆ ಭಾರೀ ಪ್ರಮಾಣದ ಮೊತ್ತ ಜಮೆಯಾಗಿರುವುದನ್ನು ಗಮನಿಸಿದ ಈ ಬಾಲಿಕ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಬಾಲಕಿ ಸರೋಜ್, ನಾನು ಅನಕ್ಷರಸ್ಥೆಯಾಗಿದ್ದು 2018ರಲ್ಲಿ ಲಕ್ನೋದಿಂದ ಸುಮಾರು 16 ಕಿ.ಮೀ ದೂರದಲ್ಲಿರ್ವ ಬನ್ಸಿದ್ ಪಟ್ಟಣದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ನನ್ನ ಹೆಸರಿನಲ್ಲಿ ಖಾತೆ ತೆರೆದಿದ್ದೇನೆ. ಸೋಮವಾರ ನಾನು ಬ್ಯಾಂಕ್ಗೆ ಹೋಗಿ ನನ್ನ ಖಾತೆಯಲ್ಲಿನ ವಿವರ ಕೇಳಿದಾಗ ಅಧಿಕಾರಿಗಳು ನನ್ನ ಖಾತೆಯಲ್ಲಿ 9.99 ಕೋಟಿ ಇದೆ ಎಂದು ಹೇಳಿದ್ದು ನನಗೆ ಆಶ್ಚರ್ಯವಾಗಿದೆ. ಗಾಬರಿಯಾಗಿ ಏನು ಮಾಡುವುದೆಂದು ಕೈ ಕಾಲು ಅಲ್ಲಾಡಲಿಲ್ಲ. ಕೂಡಲೇ ನಿಮಗೆ ಬಂದು ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಬಾಲಕಿಯು ಎರಡು ವರ್ಷಗಳ ಹಿಂದೆ ತನಗೆ ವ್ಯಕ್ತಿಯೋರ್ವ ಕರೆ ಮಾಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾನ್ಪುರದ ದೆಹಾತ್ ಜಿಲ್ಲೆಯ ನಿವಾಸಿ ನೀಲೇಶ್ ಕುಮಾರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನನಗೆ ಎರಡು ವರ್ಷಗಳ ಹಿಂದೆ ಕರೆ ಮಾಡಿ ಪ್ರಧಾನ್ ಮಂತ್ರಿ ಆವಾಸ್ ಯೋಜನಾದಿಂದ ಮನೆ ಇಲ್ಲದವರಿಗೆ ನಿಧಿ ನೀಡಲಾಗುತ್ತಿದೆ. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ನೀಡಿ ಎಂದು ವಿವರ ಕೇಳಿದ್ದ ನಾನು ಮಾಹಿತಿ ನೀಡಿದ್ದೆ. ಬಳಿಕ ಯಾವುದೇ ಕರೆಗಳು ಬಂದಿಲ್ಲ. ಆದರೆ ಸೋಮವಾರ ನನ್ನ ಖಾತೆಯಲ್ಲಿ ಅಷ್ಟೊಂದು ಪ್ರಮಾಣದ ಹಣ ಇರುವುದು ನೋಡಿ ನನಗೆ ಗಾಬರಿಯಾಗಿದೆ ಎಂದು ಹೇಳಿದ್ದಾಳೆ. ಬ್ಯ
ಈ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕ್ ಮ್ಯಾನೇಜರ್, ಸರೋಜ್ ಬ್ಯಾಂಕಿನಿಂದ 10, 000 ಹಾಗೂ 20, 000 ರೂ. ಯನ್ನು ಹಲವು ಬಾರಿ ವಿಥ್ ಡ್ರಾ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ಇನ್ನು ನೀಲೇಶ್ ಫೋನ್ ಸದ್ಯ ಸ್ವಿಚ್ಡ್ ಆಫ್ ಬರುತ್ತಿದ್ದು ಬನ್ಸಿದ್ ಪಟ್ಟಣ ಪೊಲೀಸ್ ಠಾಣಾಧಿಕಾರಿ ರಾಜೇಶ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.