ನವದೆಹಲಿ, ಸೆ. 23 (DaijiworldNews/MB) : ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಸದನದಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಮಂಡಿಸಿದ್ದು ಈ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ.
ಮಸೂದೆ ಬಗ್ಗೆ ಮಾತನಾಡಿದ ಸಚಿವ ನಿತ್ಯಾನಂದ ರೈ ಅವರು, ಈ ತಿದ್ದುಪಡಿ ಮಸೂದೆ ರಾಷ್ಟ್ರೀಯ ಮತ್ತು ಆಂತರಿಕ ಭದ್ರತೆಗಾಗಿ ರೂಪಿಸಲಾಗಿದ್ದು ವಿದೇಶಿ ಪ್ರತಿನಿಧಿಗಳು ಭಾರತದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ತಡೆಹಿಡಿಯುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.