ನವದೆಹಲಿ, ಸೆ 23(DaijiworldNews/PY): ಹಲವು ದಶಕಗಳಿಂದ ಕಾಂಗ್ರೆಸ್ ಬೆಳೆಸಿದ ನೆರೆ ರಾಷ್ಟ್ರದೊಂದಿಗಿನ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಶಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧಗಳು ದುರ್ಬಲಗೊಳ್ಳುತ್ತಿದ್ದಂತೆ, ಚೀನಾದೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ ಎಂದು ಸುದ್ದಿ ಸಂಸ್ಥೆಯೊಂದರ ವರದಿಯನ್ನು ಟ್ಯಾಗ್ ಮಾಡಿದ್ದು, ನೆರೆ-ಹೊರೆಯಲ್ಲಿ ಸ್ನೇಹಿತರಿಲ್ಲದ ವಾಸಿಸುವುದು ತುಂಬಾ ಅಪಾಯಕಾರಿ ಎಂದಿದ್ದಾರೆ.
ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವು ದುರ್ಬಲಗೊಂಡಿವೆ ಎಂದು ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಟೀಕೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ, ಹಲವು ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯವು ಉತ್ತಮವಾಗಿದೆ. ಇದರಿಂದ ಭಾರತದ ಸ್ಥಾನವು ಜಾಗತಿಕ ಮಟ್ಟದಲ್ಲಿ ಬಲಗೊಳ್ಳಲು ಸಾಧ್ಯವಾಗಿದೆ ಎಂದಿದೆ.