ನವದೆಹಲಿ, ಸೆ. 24 (DaijiworldNews/MB) : ಬಡವರ ಶೋಷಣೆ, ಸ್ನೇಹಿತರ ಪೋಷಣೆ, ಇದು ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿಯಮ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆಗಳು ಅಂಗೀಕಾರವಾಗಿದ್ದು ಇದರಿಂದಾಗಿ ಕಂಪೆನಿಗಳು ಇನ್ನು ಮುಂದೆ ಸರ್ಕಾರದ ಅನುಮತಿ ಪಡೆಯದೆಯೇ ನೌಕರರನ್ನು ಕೆಲಸದಿಂದ ತೆಗೆಯಬಹುದು ಎಂಬ ವರದಿಯಲ್ಲಿ ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರೈತರ ನಂತರ ಕಾರ್ಮಿಕರ ಮೇಲೆ ಪ್ರಹಾರ. ಬಡವರ ಶೋಷಣೆ, ಸ್ನೇಹಿತರ ಪೋಷಣೆ, ಇದು ಕೇವಲ ಮೋದಿ ಜಿ ಅವರ ನಿಯಮ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಲ್ಲೇ ಇರುವ ರಾಹುಲ್ ಗಾಂಧಿಯವರು, ಬುಧವಾರ ಹಲವು ದಶಕಗಳಿಂದ ಕಾಂಗ್ರೆಸ್ ಬೆಳೆಸಿದ ನೆರೆ ರಾಷ್ಟ್ರದೊಂದಿಗಿನ ಸಂಬಂಧವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಶಪಡಿಸಿದ್ದಾರೆ. ನೆರೆ-ಹೊರೆಯಲ್ಲಿ ಸ್ನೇಹಿತರಿಲ್ಲದ ವಾಸಿಸುವುದು ತುಂಬಾ ಅಪಾಯಕಾರಿ ಎಂದು ಹೇಳಿದ್ದರು.