ಬೆಳಗಾವಿ, ಸೆ.24 (DaijiworldNews/HR): ಸೆ.10ರಂದು ಸಾಂಬ್ರಾ ವಿಮಾನನಿಲ್ದಾಣಕ್ಕೆ ಹೋಗಿ ಸಚಿವ ಸುರೇಶ ಅಂಗಡಿ ಅವರನ್ನು ಬಿಟ್ಟು ಬಂದಿದ್ದೆ. ಆದರೆ ಅವರು ವಾಪಸ್ ಬರಲೇ ಇಲ್ಲ ಎಂದು ಸುರೇಶ್ ಅವರ ಕಾರು ಚಾಲಕರಾಗಿದ್ದ ಮುದಕಪ್ಪ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮುದಕಪ್ಪ, 'ದೆಹಲಿಗೆ ಹೋದ ತಕ್ಷಣವೇ ಫೋನ್ ಮಾಡಿ ಹುಷಾರಾಗಿರುವಂತೆ ನನಗೆ ಸಲಹೆ ನೀಡಿದ್ದರು. ಎಂದಿಗೂ ನನ್ನನ್ನು ಕೆಲಸದವನು ಎಂದು ಅವರು ಭಾವಿಸಿರಲಿಲ್ಲ. ಕುಟುಂಬದವರಂತೆ ಕಾಣುತ್ತಿದ್ದರು. ಅವರ ಹಠಾತ್ ನಿಧನ ನೋವು ತಂದಿದೆ' ಎಂಬುದಾಗಿ ಕಣ್ಣೀರಿಟ್ಟಿದ್ದಾರೆ.
ಇನ್ನು ಸಚಿವರು ಜನಸಾಮಾನ್ಯರಿರಲಿ, ಯಾರೇ ಇರಲಿ ಸಮಸ್ಯೆ, ಕಷ್ಟಗಳನ್ನು ಹೇಳಿಕೊಂಡರೆ ಕೂಡಲೇ ಸ್ಪಂದಿಸಿ ನೆರವಾಗುತ್ತಿದ್ದರು ಎಂದರು.